ಅಭಿಪ್ರಾಯ / ಸಲಹೆಗಳು

ಬಂಗಾರದ ಎಲೆಗಳು ಯೋಜನೆಯ  ಸಾಹಿತಿಗಳ ಮಾಹಿತಿ ಕೋಶಕ್ಕೆ  ಮಾಹಿತಿ ಸೇರ್ಪಡೆ ಮತ್ತು ತಿದ್ದುಪಡಿ ಮಾಡುವ ಕುರಿತು

 

ಪ್ರಕಟಣೆ

ವಿಷಯ: ಬಂಗಾರದ ಎಲೆಗಳು ಸಾಹಿತಿ ಮಾಹಿತಿ ಕೋಶಕ್ಕೆ ಸೇರ್ಪಡೆ ಮತ್ತು ತಿದ್ದುಪಡಿ ಮಾಡುವ ಕುರಿತು.

 ಈ ಹಿಂದೆ  ಅಕಾಡೆಮಿಯ ಅಧ್ಯಕ್ಷರಾಗಿದ್ದ  ಪ್ರೊ.ಅರವಿಂದ ಮಾಲಗತ್ತಿಯವರ  ಅವಧಿಯ ಯೋಜನೆ ಬಂಗಾರದ ಎಲೆಗಳು- ಸಾಹಿತಿ ಮಾಹಿತಿ ಕೋಶದಲ್ಲಿ 5400ಕ್ಕೂ ಹೆಚ್ಚು ಸಾಹಿತಿಗಳ ಮಾಹಿತಿ ಇದೆ. ಅದಕ್ಕಾಗಿ ಶ್ರಮಿಸಿರುವ ಸರ್ವರಿಗೂ ಅಭಿನಂದನೆಗಳು. ಈ ಮಾಹಿತಿಯು ಆಧುನಿಕ ತಂತ್ರಜ್ಞಾನದ ಮೂಲಕ ಸರ್ವರನ್ನು ತಲುಪಬೇಕೆಂಬ ಸದಾಶಯದಿಂದ ನಾವು ನಮ್ಮ ಅಕಾಡೆಮಿಯ ಅಂತರ್ಜಾಲದಲ್ಲಿ ಸದರಿ ಮಾಹಿತಿಯನ್ನು ಅಪ್ಲೋಡ್ ಮಾಡಿರುತ್ತೇವೆ. ಇದರ ಸದ್ಬಳಕೆಯನ್ನು ಮಾಡಿಕೊಳ್ಳಬೇಕಾಗಿ ಸರ್ವ ಸಾಹಿತ್ಯಾಸಕ್ತರಲ್ಲಿ ಕೋರುತ್ತೇವೆ.

  ಈ ಸಾಹಿತಿ ಮಾಹಿತಿ ಕೋಶವು ಪ್ರತಿ ವರ್ಷ ಆಯಾಯ ಕಾಲಘಟ್ಟದಲ್ಲಿ ಪರಿಷ್ಕರಣೆ ಗೊಳ್ಳುತ್ತಾ ಬೆಳೆಯಬೇಕೆಂಬ ಅಪೇಕ್ಷೆ ನಮ್ಮದಾಗಿದೆ. ಆದಕಾರಣ ಈಗ ಲಭ್ಯವಿರುವ ಸಾಹಿತಿಗಳ ಮಾಹಿತಿಯಲ್ಲಿ ಯಾವುದಾದರೂ ಸೇರ್ಪಡೆ ಮತ್ತು ತಿದ್ದುಪಡಿಗಳಿದ್ದಲ್ಲಿ ಅಕಾಡೆಮಿಗೆ ಬರೆದು ತಿಳಿಸಬೇಕಾಗಿ ಕೋರುತ್ತೇವೆ. ಈ ಮಾಹಿತಿ ಕೋಶಕ್ಕೆ ಹೊಸದಾಗಿ ಸೇರಿಸಬೇಕಾಗಿರುವ ಸಾಹಿತಿಗಳ ಹೆಸರುಗಳಿದ್ದಲ್ಲಿ ಸೂಕ್ತ ಮಾಹಿತಿ ಮತ್ತು ದಾಖಲೆಗಳೊಂದಿಗೆ ಅಕಾಡೆಮಿಗೆ ಕಳುಹಿಸಿಕೊಟ್ಟಲ್ಲಿ ಅದನ್ನು ಸಂಪಾದಕ ಮಂಡಳಿಯ ಮುಂದೆ ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

 

ರಿಜಿಸ್ಟ್ರಾರ್ 

ಕರ್ನಾಟಕ ಸಾಹಿತ್ಯ ಅಕಾಡೆಮಿ

ಇತ್ತೀಚಿನ ನವೀಕರಣ​ : 19-10-2022 01:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸಾಹಿತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080